ಅರಕಲಗೂಡು: ಅಪರಿಚಿತ ವ್ಯಕ್ತಿ ವೃದ್ಧೆಯೊಬ್ಬರಿಗೆ ವಂಚಿಸಿ ಹಣಪಡೆದು ಪರಾರಿಯಾಗಿರುವ ಘಟನೆ ಪಟ್ಟಣದಲ್ಲಿ ಇತ್ತೀಚೆಗೆ ನಡೆದಿದೆ.
ಸಮೀಪದ ಮಾದಿಹಳ್ಳಿ ಗ್ರಾಮದ ಸರೋಜಮ್ಮ (70) ವಂಚನೆಗೊಳಗಾದ ಮಹಿಳೆ. ಇವರು ಸೆ.30ರ ಬುಧವಾರ ಇಲ್ಲಿನ ಹಳೆಯ ತಾಲ್ಲೂಕು ಕಚೇರಿಗೆ ಆಗಮಿಸಿ ಬೆಳೆಪರಿಹಾರಕ್ಕೆ ಅರ್ಜಿಸಲ್ಲಿಸಿ ವಾಪಸ್ಸಾಗುತ್ತಿದ್ದರು. ಅಪರಿಚಿತ ವ್ಯಕ್ತಿಯೊಬ್ಬ ಇವರೊಂದಿಗೆ ಮಾತಿಗಿಳಿದು ವಿಧವೆಯರಿಗೆ ಆರೋಗ್ಯ ಇಲಾಖೆ ವತಿಯಿಂದ 20ಸಾವಿರ ರೂ ಹಣ ಕೊಡುತ್ತಿದ್ದಾರೆ. ನೀವು ಇನ್ನೂ ಪಡೆದಿಲ್ಲವೆ ಎಂದು ಹಣದ ಆಮಿಷ ತೋರಿಸಿದ್ದಾನೆ. ಹಲವಾರು ಮಂದಿಗೆ ಹಣಕೊಡಿಸಿರುವುದಾಗಿ ನಂಬಿಸಿದನಲ್ಲದೆ ತಾನು ಹಿಡಿದಿದ್ದ ಮೊಬೈಲ್ ನಲ್ಲಿ ಅಧಿಕಾರಿಗಳೊಂದಿಗೆ ಮಾತನಾಡುವಂತೆ ನಟಿಸಿದ್ದಾನೆ.
ಹಣಪಡೆಯ ಬೇಕಾದರೆ ಕೆಲವುದಾಖಲೆಗಳ ಅಗತ್ಯ ಇದ್ದು ಅದಕ್ಕೆ ಸುಮಾರು ನಾಲ್ಕು ಸಾವಿರ ರೂ ವೆಚ್ಚ ತಗಲುತ್ತದೆ, ಹಣ ನೀಡಿದರೆ ತಾನೂ ಇಂದೆ ರೂ 20ಸಾವಿರಕ್ಕೆ ಚೆಕ್ ಕೊಡಿಸುವುದಾಗಿ ನಮಬಿಸಿದ್ದಾನೆ. ಪಟ್ಟಣದ ಜವಳಿ ಅಂಗಡಿಯಲ್ಲಿ ಕೆಲಸ ಮಾಡುವ ತಮ್ಮ ಮಗನಿಗೆ ವಿಷಯ ತಿಳಿಸಿ ಹಣ ತರುವುದಾಗಿ ಸರೋಜಮ್ಮ ಹೇಳಿದಾಗ ಬೇಡ ಮಕ್ಕಳಿದ್ದಾರೆ ಎಂದರೆ ಅಂತಹವರಿಗೆ ಹಣ ದೊರೆಯುವುದಿಲ್ಲ. ನಮ್ಮ ಕಿವಿಯಲ್ಲಿರುವ ಓಲೆಯನ್ನು ಗಿರವಿ ಇಟ್ಟು ಹಣ ಕೊಟ್ಟಿರಿ, ಹಣ ಬಂದ ತಕ್ಷಣ ಇದನ್ನು ಬಿಡಿಸಿಕೊಂಡರಾಯಿತು ಎಂದು ಪುಸಲಾಯಿಸಿದ್ದಾನೆ. ವಂಚಕನ ಮೋಡಿ ಮತುಗಳಿಗೆ ಬಲಿಯಾದ ಸರೋಜಮ್ಮ ಓಲೆಗಳನ್ನು ಖಾಸಗಿ ಗಿರವಿ ಅಂಗಡಿಯಲ್ಲಿ ರೂ3500 ಹಣಕ್ಕೆ ಗಿರವಿ ಇಟ್ಟು ಹಣ ಪಡೆದಿದ್ದಾರೆ. ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದ ವಂಚಕ ಒಂದೆಡೆ ಕೂರಿಸಿ ವೈದ್ಯರೊಂದಿಗೆ ಮಾತನಾಡಿ ಬರುವುದಾಗಿ ಹೋದ. ಸ್ವಲ್ಪ ಸಮಯದಲ್ಲೆ ಮರಳಿದ ಆತ ಸರೋಜಮ್ಮ ನಿಂದ ಹಣಪಡೆದು 3800ರೂ ಆಗುತ್ತದೆ ನಾನು 300ರೂ ಹಾಕಿರುತ್ತೇನೆ ಎಂದು ತನ್ನಲ್ಲಿದ್ದ ರೂ300ನ್ನು ಸೇರಿಸಿ ಕೆಲವುದಾಖಲೆಗಳನ್ನು ಜೆರಾಕ್ಸ ಮಾಡಿಸಿ ತರುವುದಾಗಿ ಹೇಳಿ ಪರಾರಿಯಾಗಿದ್ದಾನೆ. ಸುಮಾರು ಒಂದು ಗಂಟೆಊ ಹೆಚ್ಚುಕಾಲ ಆಸ್ಪತ್ರೆಯಲ್ಲಿ ಕಾದಿದ್ದ ಸರೋಜಮ್ಮ ತಾನು ವಂಚನೆಗೆ ಒಳಗಾಗಿರುವುದರ ಅರಿವಾಗಿ ಮನೆಗೆ ವಾಪಸ್ಸಾಗಿದ್ದಾರೆ.
ತಮ್ಮ ತಾಯಿ ವಂಚನೆಗೆ ಒಳಗಾಗಿದ್ದಾರೆ. ಈ ಕುರಿತು ಪೋಲೀಸರಿಗೆ ದೂರು ನೀಡುವುದಾಗಿ ಸರೋಜಮ್ಮ ಅವರ ಮಗ ಸೋಮಶೇಖರ್ ಶನಿವಾರ ಪತ್ರಕರ್ತರಿಗೆ ತಿಳಿಸಿದರು.

No comments:
Post a Comment