ಅರಕಲಗೂಡು : ತಾಲೂಕಿನ ಗಂಜಲಗೂಡು ಗ್ರಾಪಂ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿ ಕಚೇರಿ ಮುಂದೆ ರಾತ್ರಿ ಕೂಡ ರಾಷ್ಟ್ರಧ್ವಜವನ್ನು ಹಾರಿಸುವ ಮುಖೇನಾ ಅಪಮಾನ ಎಸಗುತ್ತಿದ್ದು,ಕರ್ತವ್ಯಲೋಪದ ಹಿನ್ನೆಲೆ ಇವರ ವಿರುದ್ಧ ಮೇಲಾಧಿಕಾರಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಭಾನುವಾರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಇಂದು ಮಧ್ಯಾಹ್ನ ಗ್ರಾಪಂ ಕಚೇರಿ ಬಳಿ ಆಗಮಿಸಿದ ಗ್ರಾಮಸ್ಥರು,ಶನಿವಾರ ರಾತ್ರಿ ಬಿಚ್ಚಿಟ್ಟಿದ್ದ ರಾಷ್ಟ್ರಧ್ವಜಾವನ್ನು ಕೈಯಲ್ಲಿ ಹಿಡಿದು ಘೋಷಣೆ ಕೂಗಿದರು.ಕಳೆದ ಅಕ್ಟೋಬರ್2ರಂದು ಗಾಂಧಿಜಯಂತಿ ಆಚರಣೆ ಸಂದರ್ಭದಲ್ಲಿ ಹಾರಿಸಲಾಗಿದ್ದ ಬಾವುಟವನ್ನು 10ನೇ ತಾರಿಖು ಮುಗಿದರೂ ಕೂಡ ನಿಯಮಾನುಸಾರ ಸಿಬ್ಬಂದಿ ಇಳಿಸುವ ಮತ್ತು ಕಟ್ಟುವ ಕೆಲಸವನ್ನು ಮಾಡದೇ ಹಾಗೆಯೇ ಹಾರಿಸುತ್ತಾ ಧ್ವಜಾಕ್ಕೆ ಅಗೌರವ ಸೂಚಿಸಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನಾನಿರತ ಸ್ಥಳಕ್ಕೆ ಆಗಮಿಸಿದ ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ,ತಾಪಂ ಸದಸ್ಯ ಯೋಗೇಶ್ ಹಾಗೂ ಹಾಲಿ ಸದಸ್ಯರು ಧ್ವಜಾಕ್ಕೆ ಅಗೌರವ ಉಂಟುಮಾಡುತ್ತಿರುವ ಪಿಡಿಒ ತಾಹೀರಾ,ಕಾರ್ಯದರ್ಶಿ ಗೋಪಾಲ ಹಾಗೂ ಸಿಬ್ಬಂದಿ ವಿರುದ್ಧ ಹರಿಹಾಯ್ದರು.
ಅಧ್ಯಕ್ಷೆ ಭಾಗ್ಯಮ್ಮ ಮಾತನಾಡಿ,ಹೆಸರಿಗೆ ಮಾತ್ರ ಗ್ರಾಪಂ ಅಧ್ಯಕ್ಷೆಯಾಗಿದ್ದು,ಎಲ್ಲಾ ಕೆಲಸವನ್ನು ಅಭಿವೃದ್ಧಿ ಅಧಿಕಾರಿಯೇ ನಿರ್ವಹಿಸುತ್ತಿದ್ದಾರೆ.ಧ್ವಜಾ ಹಾರಿಸುವ ಮತ್ತು ಇಳಿಸುವ ಬಗ್ಗೆ ನನಗೆ ನಿಯಮಾನುಸಾರ ಮಾಹಿತಿ ಇಲ್ಲ.ನಮ್ಮ ಸದಸ್ಯರೊಬ್ಬರು ನಿನ್ನೆ ರಾತ್ರಿ ಧ್ವಜಾವನ್ನು ಬಿಚ್ಚಿ ಮನೆಯಲ್ಲಿ ಇಟ್ಟುಕೊಂಡಿರುವ ಬಗ್ಗೆ ಇಂದು ಗೊತ್ತಾಗಿದೆ.ಈ ಬಗ್ಗೆ ಮೇಲಾಧಿಕಾರಿಗೆ ಪತ್ರ ಬರೆದು ಅಗೌರವ ತೋರಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮನವಿ ಮಾಡಲಾಗುವುದು ಎಂದು ಹೇಳಿದರು.
ತಾಪಂ ಸದಸ್ಯ ಯೋಗೇಶ್ ಮಾತನಾಡಿ,ರಾಷ್ಟ್ರದಲ್ಲಿ ಏಕರೂಪ ವ್ಯವಸ್ಥೆ ಧ್ವಜಾರೋಹಣ ಮತ್ತು ಅವರೋಹಣ ಜಾರಿಗೆ ಬಂದಿದೆ.ಇದನ್ನು ಕಟ್ಟುನಿಟ್ಟಾಗಿ ನಿರ್ವಹಿಸುವ ಕುರಿತು ಪಂಚಾಯಿತಿ ವತಿಯಿಂದ ಓರ್ವ ವ್ಯಕ್ತಿಯನ್ನು ನೇಮಕ ಮಾಡಿ ತರಬೇತಿ ನೀಡಿದ ಬಳಿಕ ನಿರ್ವಹಿಸಲು ಕ್ರಮಕೈಗೊಂಡಿರುವುದು ಜಾರಿಯಲ್ಲಿದೆ.ಇದಕ್ಕೆ ಅಗೌರವವಾಗಿ ಮಹಿಳೆಯನ್ನು ನೇಮಕ ಮಾಡಿಕೊಂಡು ನಿಗದಿತವಾಗಿ ಕೆಲಸ ನಿರ್ವಹಿಸಲು ಅವಕಾಶ ಕೊಟ್ಟಿರುವುದದೇ ಈ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ.ಕೂಡಲೇ ತಾಪಂ ಇಒ ಹಾಗೂ ಜಿಪಂ ಸಿಇಒಗೆ ರಾಷ್ಟ್ರಧ್ವಜಾಕ್ಕೆ ಅಪಮಾನ ಮಾಡಿರುವ ಪಂಚಾಯಿತಿ ಆಡಳಿತ ವಿರುದ್ಧ ದೂರು ನೀಡಲಾಗುವುದು ಎಂದು ತಿಳಿಸಿದರು.
ಗ್ರಾಪಂ ಸದಸ್ಯ ಲೋಕೇಶ್ ಮಾತನಾಡಿ,ಶನಿವಾರ ರಾತ್ರಿ ಮನೆಗೆ ತೆರಳು ವೇಳೆ ನಿವೃತ್ತ ಶಿಕ್ಷಕರೊಬ್ಬರು ಏನಪ್ಪ,ಪಂಚಾಯಿತಿ ಕಚೇರಿ ಮುಂದೆ ರಾತ್ರಿಯೂ ರಾಷ್ಟ್ರಧ್ವಜಾ ಹಾರುತ್ತಿದೆಯಲ್ಲ ಎಂದು ತಿಳಿಸಿದ ಮೇರೆಗೆ ಪಂಚಾಯಿತಿ ಬಳಿ ಹೋಗಿ ನೋಡಿದಾಗು ವಾಸ್ತವಾಂಶ ತಿಳಿಯಿತು.ಕೂಡಲೇ ಪಿಡಿಒ,ಕಾರ್ಯದರ್ಶಿಗೆ ದೂರವಾಣಿ ಮೂಲಕ ಕರೆಮಾಡಿದಾಗ ಅವರಿಂದ ಸ್ಪಂದನೆ ಬರಲಿಲ್ಲ.ತಕ್ಷಣ ಹೋಗಿ ದ್ವಜಾವನ್ನು ಬಿಚ್ಚಿಮನೆಯಲ್ಲಿ ಇಟ್ಟುಕೊಂಡು,ಇಂದು ಮುಂಜಾನೆ ಧ್ವಜಾ ಹಾರಿಸುವವರು ಬಂದು ಕೇಳುತ್ತಾರೆ ಎಂದುಕೊಂಡೆ 8ಗಂಟೆಯಾದರೂ ಕೂಡ ಯಾರು ಬರಲಿಲ್ಲ.ಪ್ರತಿನಿತ್ಯ ಈ ಕೆಲಸ ನಿರ್ವಹಿಸುತ್ತಿದ್ದ ಅಂಗನವಾಡಿ ಸಹಾಯಕಿಗೆ ತಿಳಿಸಿದೆ ಪ್ರಯೋಜನವಾಗಲಿಲ್ಲ.ಅಂತಿಮವಾಗಿ ಗ್ರಾಮಸ್ಥರೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದೇನೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಗ್ರಾಪಂ ಸದಸ್ಯರಾದ ಶಿವಕುಮಾರ್,ಶಿವರಾಂ,ಮಾಜಿ ಉಪಾಧ್ಯಕ್ಷ ಬಸವಣ್ಣ,ಗ್ರಾಮದಪ್ರಮುಖರಾದಲಕ್ಕೇಗೌಡ,ರೂಪೇಶ್‍ಕುಮಾರ್,ನಾಗರಾಜು,ನಾರಾಯಣಗೌಡ,ಗಂಗಾಧರ್,ಧರಣೇಶ್,ರಾಜೇಗೌಡ ಮುಂತಾದವರು ಪಾಲ್ಗೊಂಡಿದ್ದರು.

No comments:
Post a Comment