ಪಾಯಕ್ಕೆ ಕಾದುನಿಂತಿದೆ ವಿದ್ಯುತ್ ಕಂಬ.

ರಾಮನಾಥಪುರ ಹೋಬಳಿ ಸಂಗೀತ ಗ್ರಾಮ ರುದ್ರಪಟ್ಟಣ ರಾಮ ಮಂದಿರದ ಹತ್ತಿರ ರಸ್ತೆ ಪಕ್ಕ ಅಪಾಯಕ್ಕೆ ಕಾದುನಿಂತಿದೆ ವಿದ್ಯುತ್ ಕಂಬ.    
ರಾಮನಾಥಪುರ.;- ಸಂಗೀತ ಗ್ರಾಮ ರುದ್ರಪಟ್ಟಣದ ಶ್ರೀ ರಾಮ ಮಂದರದ ಹತ್ತಿರ ರಸ್ತೆ ಪಕ್ಕ ವಿದ್ಯುತ್ ಕಂಬವೊಂದು ಹಲವು ದಿವಸಗಳಿಂದ ದುಸ್ಥಿತಿಯಲ್ಲಿದ್ದು ಯಾವಾಗ ಧರೆಗುರುಳುವುದೋ ಎಂಬ ಭೀತಿಯಿಂದ ಸ್ಥಳಿಯರು ದಿನದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಮನಾಥಪುರ ಹೋಬಳಿ ರುದ್ರಪಟ್ಟಣದ ದೇವಾಲಯದ ಮುಂಭಾಗದಲ್ಲಿರುವ ವಿದ್ಯುತ್ ಕಂಬಗಳು ಹಳೆಯದಾಗಿದ್ದು ಈ ವಿದ್ದುತ್ ಕಂಬ ಸಂಪೂರ್ಣ ಶಿಥಿಲಗೊಂಡಿದೆ. ಅಲ್ಲದೇ ಮೈಸೂರು ಮಾರ್ಗ ಹೋಗುವ ರಸ್ತೆಯ ಪಕ್ಕದಲ್ಲಿಯೇ 3 ಕಂಬಗಳು ಇರುವುದರಿಂದ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸ್ಥಳೀಯರು ಹಲವು ದಿವಸಗಳಿಂದ ಕೆ.ಇ.ಬಿ. ಅಧಿಕಾರಿಗಳಿಗೆ ಈ ಸಂಬಂಧ ದೂರು ನೀಡುತ್ತಿದ್ದರು ಕೇವಲ ಸ್ಥಳಕ್ಕಾಗಮಿಸಿ ವಿದ್ಯುತ್ ಕಂಬವನ್ನು ಪರೀಶಿಲಿಸಿ ಕಂಬವನ್ನು ಬದಲಿಸುವ ಅಶ್ವಾಸನೆ ನೀಡುತ್ತಿದ್ದಾರೆಯೇ ಹೊರತು 6 ತಿಂಗಳು ಕಳೆಯುತ್ತಾ ಬಂದರೂ ವಿದ್ಯುತ್ ಕಂಬವನ್ನು ರಸ್ತೆಯಿಂದ ದೂರಕ್ಕೆ ಹಾಕುವ ವ್ಯವಸ್ಥೆ ಮಾಡಿಲ್ಲ.
ಈ ಶ್ರೀಘವೇ ರಸ್ತೆ ಪಕ್ಕದಲ್ಲಿರುವ ಹಾಗೂ ಶಿಥಿಲವಾಗಿರುವ ಈ ವಿದ್ಯುತ್ ಕಂಬಗಳನ್ನು ರಸ್ತೆ ಬಿಟ್ಟು ಹೊಸ ಕಂಬವನ್ನು ಬದಲಿಸುವ ಕಾರ್ಯಕ್ಕೆ ಮುಂದಾದರೂ ಅವಘಡ ಸಂಭವಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಇತ್ತ ಗಮನ ಹರಿಸಿ ವಿದ್ಯುತ್ ಕಂಬವನ್ನು ಬೇರೆ ಸ್ಥಳಕ್ಕೆ ಬದಲಿಸುವಂತೆ ಅಗ್ರಹವಾಗಿದೆ.
ವಿದ್ಯುತ್ ಕಣ್ಣು ಮುಚ್ಚಾಲೆ;-  ವಿದ್ಯುತ್ ಕಣ್ಣು ಮುಚ್ಚಾಲೆ ಆಟದಿಂದ ರುದ್ರಪಟ್ಟಣ ಹಾಗೂ ಸುತ್ತ-ಮುತ್ತಲ ಗ್ರಾಮೀಣ ಪ್ರದೇಶದ ಜನತೆಗೆ ವಿದ್ಯುತ್ ದೀಪ, ನೀರು ಸರಬರಾಜು ಮಾಡುವುದು ಸೇರಿದಂತೆ ಇಲ್ಲಿಯ ಜನರು ಅನೇಕ ಸಮಸ್ಯೆಗಳನ್ನು ಎದುರಿಸುವಂತೆ ಅಗಿದೆ. 
ಇಲ್ಲಿ ಪ್ರತಿ ನಿತ್ಯ ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ ಸಪ್ತಸ್ವರ ದೇವತಾ ಮಂದಿರವಿದ್ದು ಇಲ್ಲಿಗೆ ಪ್ರತಿ ನಿತ್ಯ ನೂರಾರು ಪ್ರವಾಸಿಗರು ಬಂದು ಹೋಗುವ ಯಾತ್ರ ಸ್ಥಳವಾಗಿದೆ. ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದು ತುರ್ತು ಸಂದರ್ಭಗಳು ಬಂದಾಗ ವಿದ್ಯುತ್ ಗಂಟೆಗಟ್ಟಲೆ ಬರುವುದೇ ಇಲ್ಲ. ಆದ್ದರಿಂದ ವಿದ್ಯುತ್ ಸಮಸ್ಯೆಯಿಂದ ಅಧಿಕಾರಿಗಳ ನಿರ್ಲಕ್ಷದಿಂದ ಹೋಬಳಿಯ ಬಹುತೇಕ ಕಡೆ ವಿದ್ಯತ್ ವ್ಯವಸ್ಥೆ ಇಲ್ಲ. ಇದರಿಂದ ಬರಗಾಲ ಬಂದಿರುವ ಪ್ರದೇಶದಲ್ಲಿ ಅಲ್ಪ ಸಲ್ಪ ಬೆಳೆಗೆ ನೀರು ಹಾಯಿಸಲು ರೈತರು ವಿದ್ಯುತ್ ಅವ್ಯವಸ್ಥೆಯಿಂದ ಪರದಾಡುತ್ತಿದ್ದೆವೆ ಎನ್ನುತ್ತಿದ್ದಾರೆ ರೈತರು.
ಅಧಿಕಾರಿಗಳು ಇದೇ ರೀತಿ ವಿದ್ಯುತ್ ಸರಬರಾಜು ಮಾಡುವಲ್ಲಿ ಕಣ್ಣಾಮುಚ್ಚಾಲೆ ಆಟವಾಡಿದರೆ ಜನ, ಸಂಘ ಸಂಸ್ಥೆಗಳು ಬೀದಿಗಿಳಿದು ಹೋರಾಟಕ್ಕೆ ಇಳಿಯುವ ದೂರವಿಲ್ಲ. ಅಲ್ಲದೆ ನೆಮ್ಮದಿ ಕೇಂದ್ರ, ಗ್ರಾಮ ಪಂಚಾಯಿತಿ, ಬ್ಯಾಂಕ್‍ನ ವ್ಯವಹಾರ, ಅಸ್ವತ್ರೆ. ಮಕ್ಕಳ ವಿಧ್ಯಾಭಾಸ ಹಾಗೂ ಕುಡಿಯುವ ನೀರು ಎಲ್ಲದಕ್ಕೂ ವಿದ್ಯುತ್ ಅವಶ್ಯಕತೆ ಇರುವುದರಿಂದ ಸಂಗೀತ ಗ್ರಾಮ ರುದ್ರಪಟ್ಟಣ ಪ್ರವಾಸಿ ತಾಣವಾಗಿರುವುದರಿಂದ 24 ಗಂಟೆಗಳು ವಿದ್ಯುತ್ ವ್ಯವಸ್ಥೆ ಮಾಡಿಸುವಂತೆ ಸಾರ್ವಜನಿಕರ ಆಗ್ರಹಿಸಿದ್ದಾರೆ.

No comments:

Post a Comment