ಅರಕಲಗೂಡು ; ಅಂತು ಇಂತು ಸಚಿವ ಸಂಪುಟ ವಿಸ್ತರಣೆ ಟೈಂ ಫಿಕ್ಸ ಆಗಿದೆ.ಈ ಮಧ್ಯೆ ಹಾಸನದ ಅರಕಲಗೂಡು ಶಾಸಕ ಎ.ಮಂಜುಅವರಿಗೆ ಅವರ ಬೆಂಬಲಿಗರ ಇಚ್ಚೆಯಂತೆ ಸಚಿವ ಸ್ಥಾನ ಒಲಿದು ಬಂದಿದೆ.ಹಾಸನದ ಜೆಡಿಎಸ್ ಭದ್ರ ಕೋಟೆಯಲ್ಲಿ ಕಾಂಗ್ರಸ್ ಪಕ್ಷದಲ್ಲಿ ಇದ್ದು ಹೋರಾಟ ಮಾಡಿ ಸಚಿವ ಸ್ಥಾನ ಗಿಟ್ಟಿಸ್ತಿರೋ ಎ .ಮಂಜು ಅವ್ರ ರಾಜಕೀಯ ಪ್ಲಾಶ್ ಬ್ಯಾಕ್ ನೋಡಿದ್ರೆ ,ಅವ್ರು ಪೊಲಿಟಿಕಲ್ ಕರಿಯರ್ನ ಹೋರಾಟದ ಪುಟಗಳು ತೆರೆದುಕೊಳ್ತವೆ..ಆ ಬಗ್ಗೆ ಒಂದು ಸ್ಪೆಷಲ್ ರಿಪೋರ್ಟ್ ಇಲ್ಲಿದೆ.
ಮಾತಿನಲ್ಲಿ ರೆಬಲ್,ಅಂದು ಕೊಂಡ ಕೆಲಸವನ್ನು ಸಾಧಿಸೋ ತನಕ ಕೈಬಿಡದ ಚಲ.ಇದು ಸಚಿವ ಸ್ಥಾನಕ್ಕೇರ್ತಿರೋ ಹಾಸನದ ಶಾಸಕ ಎ.ಮಂಜು ಅವ್ರ ಖದರ್.ಎ.ಮಂಜು ಅವ್ರ ಹುಟ್ಟೂರು ಅರಕಲಗೂಡಿನ ಹನ್ಯಾಳು ಗ್ರಾಮ.1957 ನವೆಂಬರ್ 01 ರಂದು ಜನಿಸಿದ ಎ.ಮಂಜು ಅವ್ರಿಗೆ ಇದೀಗ 58 ವರ್ಷ.
ಎ.ಮಂಜು ಅವರಿಗೆ ರಾಜಕೀಯದ ಆರಂಭದ ದಿನಗಳು ಸುಲಭವಾಗಿರಲಿಲ್ಲ.1989 ರಲ್ಲಿ ಅರಕಲಗೂಡು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲುಕಾಣುವ ಮೂಲಕ ರಾಜಕೀಯ ಜೀವನ ಆರಂಬಿಸಿದ್ರು.ನಂತರ ಬಿಜೆಪಿಗೆ ಸೇರ್ಪಡೆ ಗೊಂಡು 1994ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡರು.ಆದ್ರೆ ರಾಜಕೀಯ ನಡೆಯಲ್ಲಿ ಸೋಲಿನಿಂದ ಕುಗ್ಗಲಿಲ್ಲ.
ಎ,ಮಂಜು ಅವ್ರು ಮೊದಲಬಾರಿಗೆ ಶಾಸಕರಾಗಿ ಗೆಲುವಿನ ಸವಿ ಸವಿದಿದ್ದು 1999ರಲ್ಲಿ.1999ರಲ್ಲಿ ಬಿಜೆಪಿ ಪಕ್ಷದಲ್ಲಿ ನಿಂತು ಅರಕಲಗೂಡು ಶಾಸಕರಾಗಿ ಎ.ಮಂಜು ಹೊರಹೊಮ್ಮಿದ್ರು.ನಂತರ 2003ರಲ್ಲಿ ಕಾಂಗ್ರಸ್ಗೆ ಪಕ್ಷಾಂತರ ಹೊಂದಿದ ಇವರು 2004ರಲ್ಲಿ ವಿಧಾನಸಭಾ ಚುನಾಣೆಯಲ್ಲಿ ಜೆಡಿಎಸ್ ನ ಎ.ಟಿ.ರಾಮಸ್ವಾಮಿ ವಿರುದ್ಧ ಜಯಬೇರಿ ಆಧಿಸಿದ್ರು.ನಂತರ 2008 -2009ರಲ್ಲಿ ಪುನ: ಶಾಸಕರಾಗಿ ಆಯ್ಕೆಯಾಗಿ ಸದ್ಯಕ್ಕೀಗ ಹಾಲಿ ಶಾಸಕರಾಗಿದ್ದಾರೆ.
ಇನ್ನು ಎ.ಮಂಜುಅವ್ರು ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ 2014ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಹಾಸನ ಸಂಸದ ಸ್ಥಾನಕ್ಕೆ ಸ್ಪರ್ಧಿಸಿ ಸಮರ್ಥವಾಗಿ ಪೈಟ್ ನೀಡಿದ್ರು.ಈ ಸಮಯದಲ್ಲಿ ದೇವೇಗೌಡರ ವಿರುದ್ಧ ಗೆಲುವಿನ ಅಂತರ ಕಡಿಮೆ ಮಾಡಿ ಕಾಂಗ್ರೆಸ್ನಲ್ಲಿ ಸಮರ್ಥ ನಾಯಕರು ಅನ್ನೋದನ್ನ ಬಿಂಬಿಸಿದ್ರು.ಈ ಚುನಾವಣೆಯಲ್ಲಿ ಎ.ಮಂಜು ಅವ್ರು ದೇವೇಗೌಡರ ವಿರುದ್ಧ 4ಲಕ್ಷದ 9ಸಾವಿರ 378 ಮತ ಪಡೆಯುವ ಮೂಲಕ ,1ಲಕ್ಷ ಮತಗಳಿಂದ ಸೋಲುಂಡರು.ಈ ಮೂಲಕ ಹಾಸನದಲ್ಲಿ ಜೆಡಿಎಸ್ ಎದುರಿಸೋ ಕಾಂಗ್ರೆಸ್ನ ಸಮರ್ಥ ನಾಯಕ ಅನ್ನೋ ಮಾತನ್ನ ಉಳಿಸಿಕೊಂಡ್ರು.
ಇನ್ನು ಎ.ಮಂಜುಅವರು ವಿಧ್ಯೆಯಲ್ಲಿ ಬಿ.ಎ.ಎಲ್.ಎಲ್ .ಬಿ.ಇಷ್ಟೆ ಅಲ್ಲ ಎ.ಮಂಜು ಅವರು 25 ವರ್ಷ ಸತತ ಒಕ್ಕಲಿಗ ಸಂಗದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.ಹಾಗೆ ಅರಕಲಗೂಡಿನ ಪಿ.ಎಲ್.ಡಿ.ಬ್ಯಾಂಕ್ನನ ಅಧ್ಯಕ್ಷರಾಗಿ 6ಬಾರಿ ಸೇವೇ ಸಲ್ಲಿಸಿದ್ದಾರೆ.15 ವರ್ಷ ಸತತ ಬೆಂಗಳುರು ಯುನಿವರ್ಸಿಟಿಯ ಸಿಂಡಿಕೇಟ್ ಮೆಂಬರ್ ಆಗಿದ್ದಾರೆ.ಇನ್ನು 2004ರಲ್ಲಿ ಕಿಮ್ಸ್ ಚೇರ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.1985 ರಿಂದ89ರ ವರೆಗೆ ಅರಕಲಗೂಡಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ.ಹಾಗೆ 1991ರಿಂದ 1993 ರವರೆಗೆ ಅರಕಲಗೂಡು ತಂಬಾಕು ಬೋರ್ಡ್ನನ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.ಹೀಗೆ ಎ.ಮಂಜು ಅವ್ರು ರಾಜಕೀಯ ಹಾಧಿಯಲ್ಲಿ ತಮ್ಮದೇ ಹಾದಿ ಸವೆಸಿ ಸಚಿವ ಸ್ಥಾನಕ್ಕೇರುತ್ತಿರೋದು ಅವರ ಅಭಿಮಾನಿಗಳಲ್ಲಿ ಹರ್ಷ ಮೂಡಿಸಿರಿದಂತೂ ನಿಜ.
ತಾಲೂಕಿನ ರಾಮನಾಥಪುರ ಹೋಬಳಿ ಹನ್ಯಾಳು ಗ್ರಾಮ ಎರಡನೇ ಬಾರಿ ಸಚಿವರÀನ್ನು ಕಾಣುತ್ತಿರುವುದನ್ನು ಸಂಭ್ರಮಿಸಿ ಇಡೀ ಗ್ರಾಮವೇ ಗುರುವಾರ ಹಬ್ಬದ ವಾತವರಣದಿಂದ ಕಂಗೊಳಿಸುತ್ತಿತ್ತು.
ಇದೇ ಮೊದಲ ಬಾರಿಗೆ ಸಚಿವರಾಗಿ ಆಯ್ಕೆಗೊಳ್ಳುವುದನ್ನು ಖಚಿತಪಡಿಸುತ್ತಿದ್ದ ಮಾದ್ಯಮಗಳ ವರದಿ ಹಾಗೂ ಶಾಸಕ ಮಂಜು ಅವರ ಆಪ್ತರಿಂದ ವಿಷಯ ತಿಳಿದುಕೊಂಡ ಗ್ರಾಮಸ್ಥರು ಬುಧವಾರ ಸಂಜೆಯಿಂದಲೇ ತಮ್ಮ ಗ್ರಾಮದ ವ್ಯಕ್ತಿಗೆ ಸಚಿವಸ್ಥಾನ ಸಿಗುತ್ತಿದೆ.ಈ ಹಿಂದೆ ಗ್ರಾಮದ ನಂಜೇಗೌಡರಿಗೆ ಸಚಿವ ಸ್ಥಾನ ಸಿಕ್ಕಿತ್ತು.ಪ್ರಸ್ತುತ ಗ್ರಾಮದ ಹೆಮ್ಮೆಯ ಪುತ್ರ ಎ.ಮಂಜಣ್ಣಗೆ ದೊರೆಯುತ್ತಿದೆ ಎಂದು ಹರ್ಷವನ್ನು ಹಂಚಿಕೊಳ್ಳುತ್ತಿರುವುದು ಕಂಡುಬಂದಿತು.
ಮನೆ ಮುಂದೆ ಜನಸ್ತೋಮ: ಶಾಸಕ ಮಂಜು ಮನೆ ಬಳಿ ಇಂದು ಬೆಳಗ್ಗೆಯಿಂದಲೇ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು,ಕಾರ್ಯಕರ್ತರು ಭೇಟಿ ನೀಡಿ ಕುಟುಂಬದ ಇತರೆ ಸದಸ್ಯರೊಂದಿಗೆ ಚರ್ಚಿಸಿ ಸಂತಸ ಹಂಚಿಕೊಂಡರು.ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ದಿನವೇ ಶಾಸಕ ಮಂಜು ಅವರಿಗೆ ಸಚಿವ ಸ್ಥಾನಸಿಗಲಿದೆ ಎಂಬ ಸ್ಪಷ್ಟತೆ ಇತ್ತು.ಆದರೆ ಅದು ಬದಲಾಯಿತು.ಮತ್ತೆ ಸಚಿವರಾಗುತ್ತಾರೆ ಎಂದು ಕಳೆದ 2ವರ್ಷಗಳಿಂದ ಕಾಯುತ್ತಿದ್ದೆವು.ಅದು ಇಂದು ನೆನಸಾಗಿದೆ ಎಂದು ಗ್ರಾಮಸ್ಥರಾದ ಹೇಮಂತ್,ಕುಮಾರ್,ಮೀರಾ,ಸುನಿತಾ ಸಂತಸ ಹಂಚಿಕೊಂಡರು.
ಶಾಲೆಯಲ್ಲಿ ಸಂಭ್ರಮ : ಮಂಜು ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ಹನ್ಯಾಳು ಗ್ರಾಮದ ಸರಕಾರಿ ಶಾಲೆ ಹಾಗೂ ಅರಕಲಗೂಡು ಪಟ್ಟಣದ ಕೋಟೆ ಸರಕಾರಿ ಮಾದ್ಯಮಿಕ ಶಾಲೆಯಲ್ಲಿ ಸಡಗರ ಕಂಡುಬಂದಿತು.ನಮ್ಮ ಶಾಲೆಯಲ್ಲಿ ಓದಿತ ವಿದ್ಯಾರ್ಥಿ ಇಂದು ಸಚಿವರಾಗುತ್ತಿರುವುದು ಹೆಮ್ಮೆಯ ಸಂಗತಿ.ಅಲ್ಲದೆ ಇಂದು ಕಲಿಯುತ್ತಿರುವ ಮಕ್ಕಳಲ್ಲಿ ಉತ್ತಮ ನಾಯಕತ್ವಗುಣ ಮೂಡಲು ಸಹಕಾರಿಯಾಗಿದೆ ಎಂದು ಶಾಲೆಯ ಶಿಕ್ಷಕರು ಹರ್ಷ ಹಂಚಿಕೊಂಡರು.
ಕ್ಷೇತ್ರಕ್ಕೆ ಮೊದಲ ಆದ್ಯತೆ : ತಾಲೂಕು ಕೇಂದ್ರದಲ್ಲಿ ಯಾವುದೇ ಕೈಗಾರಿಕೆ ಸ್ಥಾಪನೆಯಾಗಿಲ್ಲ.ಎರಡು ನದಿಗಳು ಹರಿಯುತ್ತಿದ್ದರೂ ಕೂಡ ಶಾಸ್ವತ ನೀರಾವರಿ ಯೋಜನೆ ಜಾರಿಗೊಂಡಿಲ್ಲ.ಅಲ್ಲದೆ ನದಿಗಳಿಂದ ಸಮರ್ಪಕವಾದ ಕುಡಿಯುವ ನೀರು ಯೋಜನೆ ಬೇಕಿದೆ.ನಗರ ಪ್ರದೇಶಗಳಿಗೆ ಉನ್ನತ ಶಿಕ್ಷಣಕ್ಕೆ ತೆರಳುತ್ತಿರುವ ವಿದ್ಯಾರ್ಥಿಗಳ ಅನುಕೂಲಕ್ಕೆ ಕೇಂದ್ರದಲ್ಲಿ ತಾಂತ್ರಿಕ ಶಿಕ್ಷಣ,ವಿಜ್ಞಾನ ಪದವಿ ಕಾಲೇಜು,ವೃತ್ತಿಪರ ಡಿಇಡಿ,ಬಿಇಡಿ ಕಾಲೇಜು ಸ್ಥಾಪನೆಯಾಗಬೇಕಿದೆ.ದಿನದಿಂದ ದಿನಕ್ಕೆ ಪಟ್ಟಣದಲ್ಲಿ ಜನಸಂಖ್ಯೆ ಅಧಿಕಗೊಳ್ಳುತ್ತಿರುವ ಹಿನ್ನೆಲೆ ಕೂಡಲೇ ಪಪಂ ರದ್ದುಗೊಳಿಸಿ,ಪುರಸಭೆಯನ್ನಾಗಿ ಮಾಡಿ,ಯುಜಿಡಿ ಸೌಲಭ್ಯ ಕಲ್ಪಿಸಬೇಕಿದೆ. ಪ್ರಮುಖ ರಸ್ತೆಗಳು ಹದಗೆಟ್ಟಿದ್ದು,ಇವುಗಳನ್ನು ಮೊದಲ ಆದ್ಯತೆಮೇರೆಗೆಗುಣಮಟ್ಟದಿಂದಅಭಿವೃದ್ಧಿಒಗೊಳಿಸಬೇಕಿದೆ.ಕೂಡಲೇ ಗಂಗನಾಳು ಏತನೀರಾವರಿ ಕಾಮಗಾರಿ ಆರಂಭಿಸಲು ನೂತನ ಸಚಿವ ಎ.ಮಂಜು ಮುಂದಾಗಬೇಕಿದೆ ಎಂದು ಬಾಲಾಜಿ,ಮಧು ಇತರರು ತಿಳಿಸಿದರು.

No comments:
Post a Comment