ರೈತನ ಆರ್ಥಿಕ ಬೆಳೆ ನಾಶಕ್ಕೆ ಲಗ್ಗೆ ಇಟ್ಟ ಹುಳುಗಳು.

ಅರಕಲಗೂಡು ;- ರೈತನ ಆರ್ಥಿಕ ಬೆಳೆ ನಾಶಕ್ಕೆ ಲಗ್ಗೆ ಇಟ್ಟ ಹುಳುಗಳು.
ತಾಲ್ಲೂಕಿನಲ್ಲಿ ಬಹುತೇಕ ಆರ್ಥಿಕ ಬೆಳೆಗಳಾದ ಜೋಳ, ಆಲೂಗಡ್ಡೆ, ತಂಬಾಕು, ಪ್ರಮುಖ ಬೆಳೆಗಳಾಗಿವೆ. ಈ ಬೆಳೆಗಳನ್ನ ನಂಬಿಕೊಂಡು ತನ್ನ ವಾರ್ಷಿಕ ಆರ್ಥಿಕ ವ್ಯವಸ್ಥೆಯನ್ನ ಸರಿದೂಗಿಸಿಕೊಳ್ಳುತ್ತಿದ್ದ ರೈತನಿಗೆ ಬರಸಿಡಿಲು ಬಡಿದಂತೆ ಪ್ರಾರಂಭದಿಂದಲೇ ಮಳೆಯ ಕೊರತೆ ಮತ್ತು ಹುಳುಗಳ ಬಾದೆ ಅ„ಕವಾಗಿರುವುದರಿಂದ ಆತನ ಕನಸಿಗೆ ಕೊಳ್ಳಿ ಇಟ್ಟಂತಾಗಿದೆ. 
ಮರುಭೂಮಿ ಮಿಡತೆಗೆ ಆತಂಕ:- ತಾಲ್ಲೂಕಿನಲ್ಲಿ ರೈತರು ಶೇಕಡ 37 ರಷ್ಟು ಬೆಸಾಯವನ್ನ ಪೂರ್ಣಗೊಳಿಸಿದ್ದಾರೆ. ಇನ್ನುಳಿದ ಶೇಕಡ 63 ರಷ್ಟು ವ್ಯವಸಾಯ ವಾರದೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಸಾಲ ಸೋಲ ಮಾಡಿ ಭೂಮಿಯನ್ನ ನಂಬಿ ಬೆಳೆಗಳಿಗೆ ಮುಂದಾಗಿರುವ ರೈತನಿಗೆ ಕಳೆದ ಸಾಲಿನಿಂದಲೂ ಹುಳುಗಳ ವಿರುದ್ದ ಹೋರಾಟ ಮಾಡುವುದೇ ಆಗಿದೆ. ಈ ಬಾರಿಯೂ ಪ್ರಾರಂಭದಲ್ಲೆ ಹುಳುಗಳು ಕಾಣಿಸಿಕೊಂಡಿರುವುದು ರೈತನಲ್ಲಿ ಹಾಕಿದ ಬೆಳೆ ಎಲ್ಲಿ ಕೈಸೇರುವುದಿಲ್ಲವೋ ಎಂಬ ಆತಂಕದಲ್ಲಿ ರೈತನು ಚಿಂತೆಗೆ ಒಳಗಾಗಿದ್ದಾನೆ. ಇದರೊಂದಿಗೆ ಕೆಲ ರಾಜ್ಯ ಮತ್ತು ಕೆಲ ಜಿಲ್ಲೆಗಳಲ್ಲಿ ಮರುಭೂಮಿ ಮಿಡತೆಯ ದಾಳಿಯ ಬಗ್ಗೆ ಮಾಧ್ಯಮಗಳಲ್ಲಿ ಕಂಡು ಇನ್ನು ಭಯಬೀತನಾಗಿದ್ದಾನೆ. ಇವರ ಸಂಕಷ್ಠಕ್ಕೆ ರಾಜ್ಯ ಸರ್ಕಾರ ನಿಲ್ಲದಿದ್ದರೆ, ರೈತನ ಪಾಡು ಅದೋಗತಿಗೆ ತಲುಪುತ್ತದೆ. 
ಹೆಳಿಕೆ:- ರಮೇಶ ಕುಮಾರ ಸಹಾಯಕ ಕೃಷಿ ನಿರ್ಧೇಶಕ ಅರಕಲಗೂಡು:- ತಾಲ್ಲೂಕಿನಲ್ಲಿ ಈ ಸಾಲಿನಲ್ಲಿ 45,715 ಹೆಕ್ಟೇರ ಪ್ರದೇಶದಲ್ಲಿ ಕೃಷಿಯ ಗುರಿಯನ್ನ ಹೊಂದಲಾಗಿದ್ದು, ಈಗಾಗಲೇ ಶೇಕಡ 37 ರಷ್ಟು ಬಿತ್ತನೆಯಾಗಿದೆ. ಮಳೆ ಈಗ ಪ್ರಾರಂಭವಾಗಿರುವುದರಿಂದ ಕೃಷಿ ಚಟುವಟಿಕೆ ಬಿರುಸಿನಿಂದ ಕೂಡಿದ್ದು, ವಾರದೊಳಗೆ ಬಿತ್ತನೆ ಕಾರ್ಯ ಮುಗಿಯಲಿದೆ. ಈಗಾಗಲೇ ಜೋಗ 8200 ಹೆಕ್ಟೇರ್ ಬಿತ್ತನೆಯಾಗಿದ್ದು, ಇನ್ನೂ 6500 ಹೆಕ್ಟೇರ ಬಾಕಿಯಿದೆ. ತಂಬಾಕು 6420 ಹೆಕ್ಟೇರ ಬಿತ್ತನೆಯಾಗಿದ್ದು, ಇನ್ನು 6000 ಹೆಕ್ಟೇರ ಬಾಕಿಯಿದೆ. ದ್ವಿದಳ ದಾನ್ಯ 1970 ಹೆಕ್ಟೇರ ಪ್ರದೇಶದಲ್ಲಿ ಇದ್ದು, ನೆಲೆಗಡಲೆ ಕಾಯಿ 180 ಹೆಕ್ಟೇರನಲ್ಲಿ ಬೆಳೆಯಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಜೋಳಗಳಿಗೆ ಹುಳುಗಳು ಕಂಡು ಬಂದಿದ್ದು, ಇದರ ಬಗ್ಗೆ ಮುಂಜಾಗ್ರತ ಕ್ರಮ ತೆಗೆದುಕೊಂಡು ಈಗಾಗಲೇ ವಿಜ್ಞಾನಿಗಳೊಂದಿಗೆ ಚರ್ಚಿಸಿ ಸೂಕ್ತ ಔಷಧಗಳನ್ನು ಒದಗಿಸುವ ಮೂಲಕ ಹುಳುಗಳನ್ನ ನಾಶಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ಬೇರೆ ರಾಜ್ಯಗಳಲ್ಲಿ ಮತ್ತು ಕೆಲ ಜಿಲ್ಲೆಗಳಲ್ಲಿ ಕಂಡು ಬಂದಿರುವ ಮರುಭೂಮಿ ಮಿಡತೆಯು ನಮ್ಮಲ್ಲಿ ಕಂಡುಬಂದಿರುವುದಿಲ್ಲ, ಹಾಗಾಗಿ ರೈತರು ಆತಂಕ ಪಡುವಂತಿಲ್ಲ ಎಂದು ತಿಳಿಸಿದರು. 


ಅತ್ಯಾಧುನಿಕ ಅರಿವಳಿಕೆ ಯಂತ್ರ ಉದ್ಘಾಟನೆ

ಅರಕಲಗೂಡು:  ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಹೊಸದಾಗಿ ಅಳವಡಿಸಿರುವ  ಅರವಳಿಕೆ ಯಂತ್ರವನ್ಮು  ಶನಿವಾರ  ಉದ್ಘಾಟನೆ ನೆರವೇರಿತು. 
ಶಾಸಕ ಎ.ಟಿ. ರಾಮಸ್ವಾಮಿ ಉದ್ಘಾಟಿಸಿ ಮಾತನಾಡಿ, ರೂ 15 ಲಕ್ಷ ವೆಚ್ಚದ ಈ ಅರವಳಿಕೆ ಯಂತ್ರ ಅತ್ಯಾದುನಿಕ ತಾಂತ್ರಿಕತೆ ಹೊಂದಿದೆ. ಶಸ್ತ್ರ ಚಿಕಿತ್ಸೆಗಳಿಗೆ  ಈ ಯಂತ್ರ   ಅತ್ಯಂತ ಸಹಾಯಕವಾಗಿದೆ ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕೆ.ಎಂ.ಸತೀಶ್ ಕುಮಾರ್, ಸಕಲೇಶಪುರ ಉಪ ವಿಭಾಗಾಧಿಕಾರಿ  ಗಿರೀಶ್ ನಂದನ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸ್ವಾಮಿಗೌಡ,  ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ ದೀಪಕ್ ಇನ್ನಿತರರು ಉಪಸ್ಥಿತರಿದ್ದರು.

ಅರಕಲಗೂಡು ತಾಲೂಕು ಛಾಯಾಗ್ರಹಕರು ಶನಿವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಅರಕಲಗೂಡು: ಅಪಾರ ವರ್ಷಗಳಿಂದ ಯಾವುದೇ ಸರ್ಕಾರಿ ಸೌಲಭ್ಯ ನಿರೀಕ್ಷಿಸದೇ ಸಮಾಜದ ಜನರ ಬದುಕಿನ ಭಾಗವಾಗಿ ವೃತ್ತಿಯಲ್ಲಿ ತೊಡಗಿರುವ ಛಾಯಾಗ್ರಾಹಕರ ವಿವಿಧ ಬೇಡಿಕೆಗಳನ್ನು ಸರ್ಕಾರ ಈಗಲಾದರೂ ಈಡೇರಿಸಬೇಕು ಎಂದು ಆಗ್ರಹಿಸಿ ತಾಲೂಕು ಛಾಯಾಗ್ರಹಕರು ಶನಿವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ತಾಲೂಕು ಛಾಯಾಗ್ರಾಹಕರ ಸಂಘದ ವತಿಯಿಂದ ನಡೆದ ಪ್ರತಿಭಟನೆಗೆ ಕೇರಳಾಪುರ, ಬಸವಾಪಟ್ಟಣ, ಕೊಣನೂರು ಮತ್ತು ರಾಮನಾಥಪುರ ಭಾಗದಿಂದ ಅಪಾರ ಛಾಯಾಗ್ರಾಹಕರು ಭಿತ್ತಿ ಪತ್ರಗಳನ್ನು ಹಿಡಿದು ಬೈಕ್ ರ್ಯಾಲಿಯಲ್ಲಿ ಆಗಮಿಸಿ ಪಟ್ಟಣದ ಅನಕೃ ವೃತ್ತದಲ್ಲಿ ಜಮಾಯಿಸಿ ಮಾನವ ಸರಪಳಿ ನಿರ್ಮಿಸಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಘೋಷಣೆ ಕೂಗಿದರು.
ಛಾಯಾಚಿತ್ರೋದ್ಯಮಕ್ಕೆ ಸರ್ಕಾರ ಪ್ರತ್ಯೇಕ ಅಕಾಡೆಮಿ ಸ್ಥಾಪಿಸಿ ಸರ್ಕಾರದ ಎಲ್ಲ ಅವಶ್ಯಕತೆಗಳಿಗೆ ಸ್ಟುಡಿಯೋದಲ್ಲೇ ತೆಗೆಸಿದ ಪಾಸ್‍ಪೋರ್ಟ್ ಭಾವಚಿತ್ರಗಳನ್ನು ಬಳಸಬೇಕು. ಸರ್ಕಾರಿ ಕಾರ್ಯಕ್ರಮಗಳು, ಉತ್ಸವಗಳ ಛಾಯಾಗ್ರಹಣದ ಜವಾಬ್ದಾರಿಯನ್ನು ವಹಿಸಬೇಕು. ವಿಮೆ ಸೌಲಭ್ಯ, ಕಲ್ಯಾಣ ನಿಧಿ ತೆರೆದು, ಸ್ಟುಡಿಯೋ ಸಾಮಾಗ್ರಿಗಳನ್ನು ಖರೀದಿಸಲು ರಾಷ್ಟೀಕೃತ ಬ್ಯಾಂಕುಗಳನ್ನು ಸಾಲ ಸೌಲಭ್ಯ ಒದಗಿಸಬೇಕು. ಛಾಂiÀiಗ್ರಾಹಕರ ಮಕ್ಕಳಿಗೆ ಆರ್‍ಟಿಇ ಮೂಲಕ ಶಿಕ್ಷಣ ನೀಡಬೇಕು. ಛಾಯಾಭವನ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ನಂತರ ತಾಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಇದಾದ ಬಳಿಕ ಸಚಿವ ಎ. ಮಂಜು ಅವರನ್ನು ಭೇಟಿ ಮಾಡಿ ಬೇಡಿಕೆ ಈಡೇರಿಕೆಗೆ ಸಹಕರಿಸಿ ಸರ್ಕಾರದ ಗಮನ ಸೆಳೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ರವಿಕುಮಾರ್, ಖಜಾಂಚಿ ವಿರೂಪಾಕ್ಷ, ಉಪಾಧ್ಯಕ್ಷರಾದ ಕರುಣಾಕರ್, ಧರ್ಮಣ್ಣ, ವಿಜಯಕುಮಾರ್, ಗಣೇಶ್, ಹರೀಶ್, ಪ್ರಶಾಂತ್, ಅರುಣ್ ಕುಮಾರ್, ನಟೇಶ್, ಮಂಜು, ವಿಷ್ಣು, ಕೃಷ್ಣ, ಮಧು, ಸಾಹಸಗೌಡ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.