ಅರಕಲಗೂಡು ತಾಲೂಕು ಛಾಯಾಗ್ರಹಕರು ಶನಿವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಅರಕಲಗೂಡು: ಅಪಾರ ವರ್ಷಗಳಿಂದ ಯಾವುದೇ ಸರ್ಕಾರಿ ಸೌಲಭ್ಯ ನಿರೀಕ್ಷಿಸದೇ ಸಮಾಜದ ಜನರ ಬದುಕಿನ ಭಾಗವಾಗಿ ವೃತ್ತಿಯಲ್ಲಿ ತೊಡಗಿರುವ ಛಾಯಾಗ್ರಾಹಕರ ವಿವಿಧ ಬೇಡಿಕೆಗಳನ್ನು ಸರ್ಕಾರ ಈಗಲಾದರೂ ಈಡೇರಿಸಬೇಕು ಎಂದು ಆಗ್ರಹಿಸಿ ತಾಲೂಕು ಛಾಯಾಗ್ರಹಕರು ಶನಿವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ತಾಲೂಕು ಛಾಯಾಗ್ರಾಹಕರ ಸಂಘದ ವತಿಯಿಂದ ನಡೆದ ಪ್ರತಿಭಟನೆಗೆ ಕೇರಳಾಪುರ, ಬಸವಾಪಟ್ಟಣ, ಕೊಣನೂರು ಮತ್ತು ರಾಮನಾಥಪುರ ಭಾಗದಿಂದ ಅಪಾರ ಛಾಯಾಗ್ರಾಹಕರು ಭಿತ್ತಿ ಪತ್ರಗಳನ್ನು ಹಿಡಿದು ಬೈಕ್ ರ್ಯಾಲಿಯಲ್ಲಿ ಆಗಮಿಸಿ ಪಟ್ಟಣದ ಅನಕೃ ವೃತ್ತದಲ್ಲಿ ಜಮಾಯಿಸಿ ಮಾನವ ಸರಪಳಿ ನಿರ್ಮಿಸಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಘೋಷಣೆ ಕೂಗಿದರು.
ಛಾಯಾಚಿತ್ರೋದ್ಯಮಕ್ಕೆ ಸರ್ಕಾರ ಪ್ರತ್ಯೇಕ ಅಕಾಡೆಮಿ ಸ್ಥಾಪಿಸಿ ಸರ್ಕಾರದ ಎಲ್ಲ ಅವಶ್ಯಕತೆಗಳಿಗೆ ಸ್ಟುಡಿಯೋದಲ್ಲೇ ತೆಗೆಸಿದ ಪಾಸ್‍ಪೋರ್ಟ್ ಭಾವಚಿತ್ರಗಳನ್ನು ಬಳಸಬೇಕು. ಸರ್ಕಾರಿ ಕಾರ್ಯಕ್ರಮಗಳು, ಉತ್ಸವಗಳ ಛಾಯಾಗ್ರಹಣದ ಜವಾಬ್ದಾರಿಯನ್ನು ವಹಿಸಬೇಕು. ವಿಮೆ ಸೌಲಭ್ಯ, ಕಲ್ಯಾಣ ನಿಧಿ ತೆರೆದು, ಸ್ಟುಡಿಯೋ ಸಾಮಾಗ್ರಿಗಳನ್ನು ಖರೀದಿಸಲು ರಾಷ್ಟೀಕೃತ ಬ್ಯಾಂಕುಗಳನ್ನು ಸಾಲ ಸೌಲಭ್ಯ ಒದಗಿಸಬೇಕು. ಛಾಂiÀiಗ್ರಾಹಕರ ಮಕ್ಕಳಿಗೆ ಆರ್‍ಟಿಇ ಮೂಲಕ ಶಿಕ್ಷಣ ನೀಡಬೇಕು. ಛಾಯಾಭವನ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ನಂತರ ತಾಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಇದಾದ ಬಳಿಕ ಸಚಿವ ಎ. ಮಂಜು ಅವರನ್ನು ಭೇಟಿ ಮಾಡಿ ಬೇಡಿಕೆ ಈಡೇರಿಕೆಗೆ ಸಹಕರಿಸಿ ಸರ್ಕಾರದ ಗಮನ ಸೆಳೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ರವಿಕುಮಾರ್, ಖಜಾಂಚಿ ವಿರೂಪಾಕ್ಷ, ಉಪಾಧ್ಯಕ್ಷರಾದ ಕರುಣಾಕರ್, ಧರ್ಮಣ್ಣ, ವಿಜಯಕುಮಾರ್, ಗಣೇಶ್, ಹರೀಶ್, ಪ್ರಶಾಂತ್, ಅರುಣ್ ಕುಮಾರ್, ನಟೇಶ್, ಮಂಜು, ವಿಷ್ಣು, ಕೃಷ್ಣ, ಮಧು, ಸಾಹಸಗೌಡ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 


No comments:

Post a Comment