18.25 ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ

ರಾಮನಾಥಪುರ.;- ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಸರ್ಕಾರದ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ತಪ್ಪದೆ ತಲಪುವಂತೆ ಜಾಗ್ರತೆ ವಹಿಸಿದರೆ ಮಾತ್ರ ಪ್ರತಿಯೊಬ್ಬ ಕುಟುಂಭದ ಅರ್ಥಿಕವಾಗಿ ಮುನ್ನಡೆಯಲು ಸಾಧ್ಯವಾಗುತ್ತದೆ ಎಂದು ಎಂದು ಶಾಸಕ ಎ. ಮಂಜು ತಿಳಿಸಿದರು. 

ರಾಮನಾಥಪುರ ಹೋಬಳಿ ಶಾಸಕರ ಸ್ವಗ್ರಾಮ ಹನ್ಯಾಳು  ಎಸ್.ಸಿ.ಪಿ. ಮತ್ತು ಟಿ.ಎಸ್.ಪಿ. ಯೋಜನೆಯ ಹರಿಜನ ಕಾಲೋನಿಗೆ

ಕುಡಿಯುವ ನೀರು.;- ಅಯಾ ಗ್ರಾಮ ಪಂಚಾಯಿತಿಯವರು ಗ್ರಾಮಗಳ ಏಳಿಗೆಗೆ ಮತ್ತು ಸ್ವಚ್ಚತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಈ ಭಾಗಕ್ಕೆ ಹೆಚ್ಚಿನ ಶಾಶ್ವತ ನೀರಾವರಿ ಸೌಲಭ್ಯ ಒದಗಿಸಬೇಕು ಎಂಬುದು ನನ್ನ ಮಹತ್ವಾಕಾಂಕ್ಷೆಯಾಗಿದೆ. ಇಲ್ಲಿಯ ಕಾವೇರಿ ನದಿಯ ದಂಡೆಯಲ್ಲಿರುವ ಸುಮಾರು 54 ಹಳ್ಳಿಗಳಿಗೆ ರಾಮನಾಥಪುರ, ಕೇರಳಾಪುರ, ರುದ್ರಪಟ್ಟಣ, ಕಾಳೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ 100 ಕೋಟಿ ರೂ ಕುಡಿಯುವ ಶುದ್ದಿಕರಣ ನೀರಿನ ವ್ಯವಸ್ಥೆಗೆ ಮಂಜುರಾತಿ ದೊರೆತಿದೆ. ತಾಲ್ಲೂಕಿನಲ್ಲಿ ಗ್ರಾಮೀಣ ವ್ಯಾಪ್ತಿಯ ಬಹುತೇಕ ಎಲ್ಲಾ ದಲಿತರ ಕಾಲೋನಿಗಳಿಗೆ ಸಿಮೆಂಟ್ ರಸ್ತೆ ಹಾಗೂ ಚರಂಡಿ ನಿರ್ಮಿಸಿ ಮೂಲಭೂತಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.                                                       

ಮಾದರಿ ತಾಲ್ಲೂಕು.;-ವಿರೋಧ ಪಕ್ಷದವರ ಟೀಕೆಗಳಿಗೆ ಕಿವಿಗೊಡದೇ ರಾಜ್ಯದಲ್ಲಿಯೇ ಅರಕಲಗೂಡು ವಿಧಾನಸಭಾ ಕ್ಷೇತ್ರವನ್ನು ಮಾದರಿಯಾಗಿ ಕಾಣಿಸಲು ಅಭಿವೃದ್ಧಿ ಪಡಿಸುವ ಗುರಿ ಹೊಂದಲಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕ್ಷೇತ್ರದಲ್ಲಿ ಎಲ್ಲ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಕೇರಳಾಪುರ- ರಾಮನಾಥಪುರ ಮಾರ್ಗದ ರಸ್ತೆ ಪ್ರಗತಿಗೆ ಸರ್ಕಾರಕ್ಕೆ 33 ಕೋಟಿ ರೂ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಟ್ಟೇಪುರ ಮಾರ್ಗವನ್ನು ಸಿಮೆಂಟ್ ಕಾಂಕ್ರಿಟ್ ರಸ್ತೆ ಮಾಡಿಸಲಾಗುವುದು ಹಳೇಬೀಡು- ಆನೆಚೌಕೂರು ರಾಜ್ಯ ಹೆದ್ದಾರಿ ಅಭಿವೃದ್ಧಿ 219 ಕೋಟಿ ರೂ ಅನುದಾನ ಬಿಡುಗಡೆಯಾಗಿದೆ ಮುಂದಿನ ಡಿಸಂಬರ್ ತಿಂಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.
ವಿವಿಧ ಕಾಮಗಾರಿ;- ಸ್ಥಳಿಯ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಯೋಜನೆಯಡಿಯಲ್ಲಿ ಕಳೆದೆರಡು ವರ್ಷಗಳಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ 4 ಕೋಟಿ ರೂ ವೆಚ್ಚದಲ್ಲಿ 110 ಕಾಮಗಾರಿಗಳನ್ನು ನಿರ್ವಹಿಸಲಾಗಿದ್ದು 30ಕ್ಕೂ ಅಧಿಕ ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಭೂ ಅಭಿವೃದ್ಧಿ ನಿಗಮದ ವತಿಯಿಂದ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದಡಿ 2.80 ಕೋಟಿ ರೂ ವೆಚ್ಚದಲ್ಲಿ 33 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಹಾಗೂ ಸುವರ್ಣ ಗ್ರಾಮ 3 ಮತ್ತು 5ನೇ ಹಂತದಲ್ಲಿ 11.50 ಕೋಟಿ ರೂ ವೆಚ್ಚದಲ್ಲಿ 18 ಕಾಮಗಾರಿಗಳನ್ನು 3.75 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗಿದೆ. ಲೋಕೋಪಯೋಗಿ ಇಲಾಖೆ ವತಿಯಿಂದ 8,168 ಲಕ್ಷ ರೂ ವೆಚ್ಚದಲ್ಲಿ 147 ಕಾಮಗಾರಿಗಳಿಗೆ ಪ್ರಸ್ತಾವನೆ ಕಳುಹಿಸಿ 88 ಕೆಲಸಗಳನ್ನು ಪೂರ್ಣಗೊಳಿಸಲಾಗಿದ್ದು ಉಳಿದವು ಪ್ರಗತಿಯಲ್ಲಿವೆ ಎಂದರು.

ರುದ್ರಪಟ್ಟಣ ಗ್ರಾ.ಪಂ. ಮಾಜಿ ಅಧ್ಯಕ್ಷ ಗುಂಡಣ್ಣ, ಹೋಬಳಿ ಅಧ್ಯಕ್ಷ ಜಿ.ಸಿ. ಮಂಜೇಗೌಡ, ಮುಖಂಡ ಗಂಗೂರು ಕುಮಾರ್, ಪ್ರಭಾಕರ್, ಶಾಸಕರ ಅಪ್ತ ಸಹಾಯಕ ಹೊಯ್ಸಳ, ಬಸವರಾಜ್, ರೇವಣ್ಣ, ಅಶೋಕ್, ರಾಮಚಂದ್ರು, ವಿಜಯಕುಮಾರ್, ಎಂ.ಎಚ್. ಕೃಷ್ಣಮೂರ್ತಿ, ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಣೇಶ್, ಸಹಾಯಕ ಇಂಜಿನಿಯರ್‍ಮಹೇಶ್ ಮುಂತಾದವರು ಭಾಗವಹಿಸಿದ್ದರು.

ಕಾಂಕ್ರೀಟ್ ರಸ್ತೆಗೆ 18.25 ವೆಚ್ಚದಲ್ಲಿ ಶಂಕುಸ್ಥಾಪನೆ ನೆರವೇರಿಸಿದ ನಂತರ ನಡೆದ ಸಭೆಯಲ್ಲಿ ಮಾತನಾಡಿದ ಅವರು ತಮಗಿಟ್ಟ ಬಂದವರಿಗೆ ಸವಲತ್ತ ನೀಡಿದರೆ ಸರಕಾರದ ಯೋಜನೆ ನಿಷ್ಟ್ರಯೋಜಕವಾಗುತ್ತದೆ. ಗ್ರಾಮದ ಎಸ್.ಸಿ.ಪಿ. ಮತ್ತು ಟಿ.ಎಸ್.ಪಿ. ಯೋಜನೆಯಲ್ಲಿ ಪ್ರಾರಂಬಿಸುರುವ ಹರಿಜನ ಕಾಲೋನಿಗೆ ಕಾಂಕ್ರೀಟ್ ರಸ್ತೆಗೆ ರಸ್ತೆಗಳ ಗುಣಮಟ್ಟ ಕಾಪಾಡಬೇಕು. ಗ್ರಾಮಗಳ ಏಳಿಗೆಗೆ ಮತ್ತು ಸ್ವಚ್ಚತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಅಧಿಕಾರಿಗಳು ಜನಸಾಮಾನ್ಯರೊಂದಿಗೆ ಸಮಸ್ಯೆಗೆ ಸ್ವಂದಿಸಬೇಕು ಎಂದರು.

No comments:

Post a Comment