ಪ್ರತಿಭಾ ಪುರಸ್ಕಾರ

ಅರಕಲಗೂಡು: ಶೈಕ್ಷಣಿಕವಾಗಿ ತೊಡಗಿರುವ ವಿದ್ಯಾರ್ಥಿಗಳಿಗೆ ಪ್ರಬುದ್ಧತೆ ವಿಕಾಸಗೊಳಿಸಿಕೊಳ್ಳಲು ಸಾಕಷ್ಟು ಅವಕಾಶವಿದ್ದು,ನಿರಂತರ ಅಧ್ಯಯನದಿಂದ ಅಂದುಕೊಂಡ ಗುರಿಯನ್ನು ಮುಟ್ಟಬಹುದಾಗಿದೆ ಎಂದು ವಿಷಯ ಪರಿವೀಕ್ಷಕ ಚನ್ನಯ್ಯ ತಿಳಿಸಿದರು.
ಭಾನುವಾರ ಪಟ್ಟಣದ ಶಿಕ್ಷಕರ ಭವನದಲ್ಲಿ ಬಹುಜನ ವಿದ್ಯಾರ್ಥಿ ಸಂಘ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ,ಇಂದಿನ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೋಷಕರ ಸಂಪೂರ್ಣ ಸಹಕಾರ ಹಾಗೂ ಶಿಕ್ಷಕರ ಬೋಧನಾ ಕ್ರಮ ಮತ್ತು ಮಕ್ಕಳ ಪರಿಶ್ರಮ ಪ್ರಮುಖ ಕಾರಣವಾಗಿದೆ.ಇದನ್ನು ಪರಿಗಣಿಸಿ ದಲಿತ,ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಪ್ರತಿಭಾವಂತ ಮಕ್ಕಳನ್ನು ಗೌರವಿಸುತ್ತಿರುವುದು ಇತರರನ್ನು ಪ್ರೇರೇಪಿಸಿದಂತ್ತಾಗಿದೆ ಎಂದು ಹೇಳಿದರು.
ಅಂಬೇಡ್ಕರ್ ಹೇಳಿದಂತ್ತೆ ಸಮಾಜದಲ್ಲಿನ ಸುಖವನ್ನು ಅನುಭವಿಸುತ್ತಿರುವವರು ಒಂದಷ್ಟು ಸಹಾಯವನ್ನು ಇತರರಿಗೆ ನೀಡುವ ಮುಖೇನಾ ಸಾರ್ಥಕತೆ ಕಂಡುಕೊಳ್ಳಬೇಕಿದೆ.ಅವಕಾಶ ವಂಚಿತರು,ಸಾಧಕರು ಸಾಕಷ್ಟು ಮಂದಿ ಇದ್ದು ಇವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಜವಾಬ್ದಾರಿ ನಮ್ಮೇಲರ ಮೇಲಿದೆ ಎಂದು ಅವರು ನುಡಿದರು.
ವೇದಿಕೆಯಲ್ಲಿ ಕೆಎಸ್‍ಆರ್‍ಟಿಸಿ ನೌಕರರ ಈರಾಜು,ನಿವೃತ್ತ ಶಿಕ್ಷಕ ದೇವಾಜಿ,ಶಿಕ್ಷಕ ರಾದ ದೇವರಾಜು,ಮಹದೇವಪ್ಪ,ಅರಣ್ಯಾಧಿಕಾರಿ ದೇವರಾಜು,ಕೊಣನೂರು ಕಾಂತರಾಜು,ಬರಗೂರು ಆನಂದ್,ಉಮೇಶ್ ಇತರರು ಉಪಸ್ಥಿತರಿದ್ದರು.
ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ದಲಿತ,ಒಬಿಸಿ ಹಾಗೂ ಅಲ್ಪಸಂಖ್ಯಾತ ಸಮುದಾಯದ ಮಕ್ಕಳು ಎಸ್‍ಎಸ್‍ಎಲ್‍ಸಿ,ಪಿಯುಸಿ ಮತ್ತು ಪದವಿ ಪರೀಕ್ಷೆಯಲ್ಲಿ ಶೇ.65ಕ್ಕಿಂತ್ತ ಅಧಿಕ ಅಂಕಗಳನ್ನು ಗಳಿಸಿದ ಸುಮಾರು 50ಮಕ್ಕಳಿಗೆ ಅಂಬೇಡ್ಕರ್‍ಕ್ಲಾಸ್ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

No comments:

Post a Comment