ಅರಕಲಗೂಡು: ಪಟ್ಟಣದಲ್ಲಿ ವಿಜಯ ದಶಮಿ ಹಬ್ಬದ ಪ್ರಯುಕ್ತ ಶುಕ್ರವಾರ ರಾತ್ರಿ ನಡೆದ ಅರಕಲಗೂಡು ದಸರಾ ಮಹೋತ್ಸವದಲ್ಲಿ ದೇವಾನು ದೇವತೆಗಳ ಸಾಲು ಮೆರವಣಿಗೆ ಹಾಗೂ ವಿವಿಧ ಸ್ಥಬ್ಧಚಿತ್ರಗಳ ಆಕರ್ಷಕ ಪ್ರದರ್ಶನ ಜನಮನÀ ರಂಜಿಸಿತು.
ಕೋಟೆ ಕೊತ್ತಲು ಗಣಪತಿ, ಲಕ್ಷ್ಮೀನರಸಿಂಹಸ್ವಾಮಿ, ಅಮೃತೇಶ್ವರಸ್ವಾಮಿ ಹಾಗೂ ಗ್ರಾಮದೇವತೆ ದೊಡ್ಡಮ್ಮ ದೇವಸ್ಥಾನದಲ್ಲಿ ವಿವಿಧ ಮಠಾಧೀಶರು ಪೂಜೆ ಸಲ್ಲಿಸಿದ
ನಂತರ ರಾತ್ರಿ 9 ಗಂಟೆ ಸುಮಾರಿಗೆ ಅರಕಲಗೂಡು ದಸರಾ ಪರಂಪರೆಯನ್ನು ಬಿಂಬಿಸುವ ಸ್ಥಬ್ಧಚಿತ್ರಗಳ ವೈಭವದ ಮೆರವಣಿಗೆಗೆ ಚಾಲನೆ ದೊರಕಿತು.
ಗ್ರಾಮದೇವತೆ ಸೇರಿದಂತೆ ಪಟ್ಟಣದ 18 ಕೋಮಿಗೆ ಸೇರಿದ ದೇವಾನು ದೇವತೆಗಳ ಉತ್ಸವ ಮೂರ್ತಿಯನ್ನು ಬಣ್ಣ ಬಣ್ಣದ ವಿದ್ಯುತ್ ಬೆಳಕಿನಿಂದ ಕಂಗೊಳಿಸುವ ವಾಹನದ ಮೇಲೆ ಕೂರಿಸಿ ಉತ್ಸವ ನಡೆಸಲಾಯಿತು. ಇದಲ್ಲದೇ ಕಣ್ಣು ಕೋರೈಸುವ ವಿದ್ಯುತ್ ಬೆಳಕಿನಿಂದ ಹೊಳೆಯುತ್ತಿದ್ದ ಪೌರಾಣಿಕ ಹಿನ್ನಲೆ ಸಾರುವ ಸ್ಥಬ್ಧಚಿತ್ರಗಳ ವೈಭವೋಪೇತಮೆರವಣಿಗೆದಸರಾ ಉತ್ಸವಕ್ಕೆ ಮೆರಗು ನೀಡಿತು.
ಕೋಟೆ ಪ್ರಸನ್ನ ಗಣಪತಿ ಸಮಿತಿ ವತಿಯಿಂದ ಕಾದಂಬರಿ ಸಾರ್ವಭೌಮ ಅನಕೃ, ಜಗಜ್ಯೋತಿ ಬಸವೇಶ್ವರ, ಕ್ರಿಸ್ತ ಶರಣಾಲಯ, ವೀರಭದ್ರೇಶ್ವರ, ಬೀರಲಿಂಗೇಶ್ವರ, ವಡ್ಡರಹಳ್ಳಿ ನೆಟ್ಟಕಲ್ಲಮ್ಮ, ನರಸಿಂಹಸ್ವಾಮಿ, ಬನಶಂಕರಿ, ಮೂಕಾಂಬಿಕೆ, ಶನಿದೇವರು, ಪೇಟೆ ಕೆಇಬಿ ರಸ್ತೆಯ ಶಕ್ತಿ ಗಣಪತಿ, ವಿಶ್ವಕರ್ಮ ಜನಾಂಗದ ವತಿಯಿಂದ ಕಾಳಮ್ಮ ದೇವತೆ ಮೂರ್ತಿ ಹಾಗೂ ಸಂತಕವಿ ಕನಕದಾಸ, ಮಡಿವಾಳ ಮಾಚಿದೇವ ಹಾಗೂ ನಾಡಪ್ರಭು ಕೆಂಪೇಗೌಡರ ಭಾವಚಿತ್ರ ಹೊತ್ತ ಸ್ಥಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗಿದವು. ಇದರೊಟ್ಟಿಗೆ ಕೃತಕ ಅಂಬಾರಿ ಮೇಲೆ ಬಾಲಕನೊಬ್ಬ ವೀರಾಜಮಾನವಾಗಿ ಕುಳಿತು ಹೆಜ್ಜೆ ಹಾಕಿದ್ದು ಗಮನ ಸೆಳೆಯಿತು.
ತಾಲೂಕು ಯುವ ಒಕ್ಕಲಿಗರ ವೇದಿಕೆ ವತಿಯಿಂದ ನಡೆದ ಸಾಕ್ಷ್ಯಚಿತ್ರ ಮೆರವಣಿಗೆಯಲ್ಲಿ ತಾಲೂಕಿನ ಐತಿಹಾಸಿಕ ಪರಂಪರೆಯ ಸಾರುವಸ್ಥಳ ಮಹಿಮೆ ಹಾಗೂ ದೇಗುಲಗಳು ಕುರಿತು ಮಾಹಿತಿ ಪ್ರದರ್ಶಿಸಿದ್ದು ಜನರ ಮೆಚ್ಚುಗೆಗೆ ಪಾತ್ರವಾಯಿತು.
ದಾರಿಯುದ್ದಕ್ಕೂಹೊನ್ನವಳ್ಳಿಯ ಕೀಲುಕುದುರೆ, ಕೇರಳ ರಾಜ್ಯದಿಂದ ಕರೆಸಲಾಗಿದ್ದ ಚೆಂಡೆ ವಾದ್ಯ ಕುಣಿತ, ಉದ್ದೂರು ಸುರೇಶ ಅವರ ವೀರಗಾಸೆ ಕಂಸಾಳೆ ನೃತ್ಯ ಪ್ರದರ್ಶನ ನೀಡಿ ಮೆರವಣಿಗೆ ಕಳೆಗಟ್ಟುವಂತೆ ಮಾಡಿದರು. ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸಹಸ್ರಾರು ಸಂಖ್ಯೆಯ ಜನರು ಉತ್ಸಾಹಭರಿತರಾಗಿ ರಾತ್ರಿ 7 ಗಂಟೆಯಿಂದಲೇ ತಂಡೋಡಪ ತಂಡವಾಗಿ ಆಗಮಿಸಿದ್ದರು. ರಾತ್ರಿ 9ರಿಂದ ಮಧ್ಯರಾತ್ರಿ 1 ಗಂಟೆ ತನಕ ನಡೆದ ದಸರಾ ಉತ್ಸವದ ಮೆರವಣಿಗೆಯನ್ನು ಕಣ್ತುಂಬಿಕೊಂಡು ಪುನೀತರಾದರು.
ಕೋಟೆ ದೊಡ್ಡಮ್ಮ ದೇವಸ್ಥಾನದಿಂದ ಹೊರಟ ದಸರಾ ಮೆರವಣಿಗೆ ಅನಕೃ ವೃತ್ತದ ಮಾರ್ಗವಾಗಿ ಸಾಗಿ ಪೇಟೆ ಸಂತೆಮರೂರು ವೃತ್ತದ ಬಳಿಯಿರುವ ಬನ್ನಿ ಮಂಟಪದ ಬಳಿ ಸಂಪನ್ನಗೊಂಡಿತು. ಪುರೋಹಿತ ಚಂದ್ರಶೇಖರ್ ಬನ್ನಿ ಪೂಜೆ ನೆರವೇರಿಸಿದರು. ಈ ಕ್ಷಣವನ್ನು ಸಾವಿರಾರು ಜನರು ಸಾಕ್ಷೀಕರಿಸಿ ಹರ್ಷೋದ್ಘಾರ ಮಾಡಿದರು.ತಹಶೀಲ್ದಾರ್ ಆರ್. ಮೋಹನ್ ಕದಳಿ ಛೇದನ ನಡೆಸಿ ತಾಲೂಕಿಗೆ ಉತ್ತಮ ಮಳೆ ಬೆಳೆಯಾಗಿ ಸಮೃದ್ಧಿ ನೆಲೆಸಲಿ ಎಂದು ಹರಸಿದರು.
ಈ ಸಂದರ್ಭದಲ್ಲಿದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಅರೇಮಾದನಹಳ್ಳಿ ವಿಶ್ವಕರ್ಮ ಜಗದ್ಗುರು ಶಿವಸುಜ್ಞಾನಮೂರ್ತಿ ಸ್ವಾಮೀಜಿ, ಚಿಲುಮೆ ಮಠದ ಜಯದೇವ ಸ್ವಾಮೀಜಿ, ಕೆಸವತ್ತೂರು ಸಿದ್ದಲಿಂಗೇಶ್ವರ ಮಠದ ಬಸವರಾಜೇಂದ್ರ ಸ್ವಾಮೀಜಿ, ತಾಪಂ ಅಧ್ಯಕ್ಷ ಎ.ಸಿ. ದೇವರಾಜೇಗೌಡ, ಪಪಂ ಅಧ್ಯಕ್ಷೆ ಶಾರದಮ್ಮ, ಉಪಾಧ್ಯಕ್ಷ ಬೀರಪ್ಪ ಮುಂತಾದವರು ಶಮಿ ಪೂಜೆಯಲ್ಲಿ ಭಾಗವಹಿಸಿದ್ದರು.

No comments:
Post a Comment