ಶಸ್ತ್ರಚಿಕಿತ್ಸೆಗೊಳಪಟ್ಟ ಯುವಕ ಸಾವು, ಸಂಬಂಧಿಕರಿಂದ ಆಸ್ಪತ್ರೆ ಮುಂದೆ ದರಣಿ

ಅರಕಲಗೂಡು ತಾಲ್ಲೂಕಿನ ಸಮೀಪದ ಮಲ್ಲಿಪಟ್ಟಣದ ಬೂದನೂರು ಗ್ರಾಮಸ್ಥ ೨೨ ವರ್ಷ ಪ್ರಾಯದ ಗಗನ್‌ಕುಮಾರ್ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಕಲಾಗಿದ್ದರು. ಅಪೆಂಡಿಕ್ಸ್ ಸಮಸ್ಯೆಯಿಂದ ಬಳಲುತ್ತಿದ್ದ ಗಗನ್‌ಕುಮಾರ್ ಅವರಿಗೆ ಶಸ್ತ್ರಚಿಕಿತ್ಸೆ ಮಾಡಬೇಕೆಂದು ವೈದ್ಯರು ಹೇಳಿದ್ದರು ಎನ್ನಲಗಿದೆ. ಅದರಂತೆ ಬುಧವಾರ ಬೆಳಿಗ್ಗೆ ಆಪರೇಷನ್ ಥಿಯೇಟರ್‌ಗೆ ಗಗನ್‌ಕುಮಾರ್‌ನನ್ನು ವರ್ಗಾಯಿಸಲಾಗಿತ್ತು.

ಮಧ್ಯಾಹ್ನದವರೆಗೆ ಗಗನ್‌ಕುಮಾರ್ ಬಗ್ಗೆ ಯಾವುದೇ ಮಾಹಿತಿ ನೀಡದ ವೈದ್ಯರು ಮದ್ಯಾಹ್ನದ ನಂತರ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಇದರಿಂದ ಆಕ್ರೊಶಗೊಂಡ ಮೃತ ಗಗನ್‌ಕುಮಾರ್ ಸಂಬಂಧಿಕರು ಆಸ್ಪತ್ರೆ ಮುಂಭಾಗ ಜಮಾಯಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಳಿಗ್ಗೆಯಿಂದ ಶಸ್ತ್ರಚಿಕಿತ್ಸೆ ಮಾಡುವುದಾಗಿ ಹೇಳಿ ಯಾವುದೇ ಮಾಹಿತಿ ನೀಡದೆ ಮದ್ಯಾಹ್ನದ ಬಳಿಕ ಏಕಾಏಕಿ ಮೃತಪಡ್ಡಿದ್ದಾರೆ ಎಂದು ಹೇಳಿರುವ ವೈದ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮೃತ ಗಗನ್‌ಕುಮಾರ್ ಸಂಬಂಧಿಕರು ಆಗ್ರಹಿಸಿದ್ದಾರೆ.

ಈ ಸಂದರ್ಭ ವೈದ್ಯರು ಗಗನ್‌ಕುಮಾರ್ ಹೃದಯಾಪಘಾತದಿಂದ ಮೃತಪಟ್ಟಿದ್ದಾರೆ ಎಂದು ಸಬೂಬು ಹೇಳಿದ್ದಾರೆ. ಆಸ್ಪತ್ರೆ ಮುಂಭಾಗ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.

No comments:

Post a Comment